ವಿಷಯ : ಪ್ರವಾದಿ ( ﷺ ) ರ ಕನಸು ಕಾಣಲು


بسم الله الرحمن  الرحيم




ಪ್ರವಾದಿ ( ﷺ ) ರ ಕನಸು ಕಾಣಲು ಭಾಗ್ಯ ಲಭಿಸಿದವರು ಆ ಕನಸು ಕಾಣಲು ಕಾರಣವಾದ ಅಂಶವನ್ನು ವಿವರಿಸಿದ್ದಾರೆ , ಅವುಗಳನ್ನು ಒಂದೊಂದಾಗಿ ಬದುಕಿನಲ್ಲಿ ಮಾಡಿದರೆ ನಮಗೂ ಅಂತಹ ಸೌಭಾಗ್ಯ ಲಭಿಸಬಹುದು . ಅಲ್ಲಾಹನು ಅನುಗ್ರಹಿಸಲಿ - ಆಮೀನ್ .
 
 🔷ಇಮಾಂ ನವವೀ (رضي اللهٰ عنه)  ಕಿತಾಬುಲ್ ಆದ್ಕಾರ್‌ನಲ್ಲಿ ಹೇಳುತ್ತಾರೆ . “ಶುಕ್ರವಾರ ರಾತ್ರಿ 2 ರಕ್ ಅತ್ ನಮಾಝ್ ಮಾಡಬೇಕು.ಪ್ರತೀ ರಕ್‌ ಅತ್ ನಲ್ಲೂ ಫಾತಿಹಾ ಒಂದು ಸಲ,ಆಯತುಲ್ ಕುರ್ಸಿ ಐದು ಸಲ ಓದಬೇಕು.ನಮಾಝ್ ಪೂರ್ತಿಗೊಳಿಸಿದ ಬಳಿಕ ಪ್ರವಾದಿ(ﷺ)ರ ಮೇಲೆ ಸಾವಿರ ಸಲ ಸ್ವಲಾತ್ ಹೇಳಿ ಪ್ರವಾದಿ ( ﷺ ) ರ ಕನಸು ಕಾಣಬೇಕೆಂಬ ಇರಾದೆಯಿಂದ ಉತ್ತಮ ವಸ್ತ್ರ ಧರಿಸಿ ಶುದ್ದಿಯಿರುವ ಹಾಸಿಗೆಯಲ್ಲಿ ಮಲಗ ಬೇಕು.”

         🔷ಮಜ್ ಮುಲ್ ಹದೀಸ್ ಎಂಬ ಗ್ರಂಥದಲ್ಲಿ ಹೀಗಿದೆ ; ಪ್ರವಾದಿ (ﷺ) ಹೇಳಿದ್ದಾರೆ .“ನನ್ನ ಕನಸು ಕಾಣಬೇಕೆಂಬ ಆಸೆಯಿದ್ದವರು ಶುಕ್ರವಾರ ರಾತ್ರಿ ಎರಡು ರಕ್ಅತ್ ಎಂಬಂತೆ ನಾಲ್ಕು ರಕ್ಅತ್ ನಮಾಝ್ ನಿರ್ವಹಿಸಬೇಕು . ಪ್ರತೀ ರಕ್ಅಕ್‌ನಲ್ಲೂ ಫಾತಿಹಾದ ನಂತರ ಅಳ್ಳುಹಾ , ಅಲಮ್ ನಶ್ ರಹ್, ಇನ್ನಾ ಅನ್‌ಝಲ್‌ನಾಹು, ಇದ್ಯಾ ಝಲ್ಝಿಲತಿಲ್ ಅರ್ ಳು. . . ಎಂಬೀ ನಾಲ್ಕು ಅಧ್ಯಾಯಗಳನ್ನು ಪಾರಾಯಣ ಮಾಡಬೇಕು , ಸಲಾಂ ಹೇಳಿದ ಬಳಿಕ ಎಪ್ಪತ್ತು ಸಲ ಅಸ್ತಗ್ಫಿರುಲ್ಲಾಹಲ್ ಅಳೀಮ್ ಮತ್ತು ಎಪ್ಪತ್ತು ಸಲ ಸ್ವಲಾತ್ ಹೇಳಿ ಮಲಗಬೇಕು . ಹೀಗೆ ಮಾಡಿದರೆ ನನ್ನ ಕನಸು ಕಾಣಬಹುದು .”

   🔷 “ಶುಕ್ರವಾರ ದಿನದಂದು ಯಾರಾದರೂ ಸಾವಿರ ಸಲ ಸೂರತುಲ್ ಖದ್ರ್ ಓದಿದರೆ ಪ್ರವಾದಿ ( ﷺ ) ರ ಕನಸು ಕಾಣದೆ ಆತ ಮರಣ ಹೊಂದಲಾರ.” ( ಖಸ್ವೀದತುಲ್ ಅಸ್ರಾರ್)

     🔷 ಶುಕ್ರವಾರ ರಾತ್ರಿ ಸಾವಿರ ಸಲ ಸೂರತುಲ್ ಕೌಸರ್ ಮತ್ತು ಸಾವಿರ ಸಲ ಸ್ವಲಾತ್ ಹೇಳಿ ಮಲಗಿದರೆ ಪ್ರವಾದಿ ( ﷺ) ರ ಕನಸು ಕಾಣುತ್ತದೆಯೆಂದು ಕೆಲ ವಿದ್ವಾಂಸರು ಹೇಳಿದ್ದಾರೆ .

    🔷ಶುಕ್ರವಾರ ಅರ್ಧರಾತ್ರಿಯ ನಂತರ ಸೂರತ್ ಖುರೈಷ್ ಸಾವಿರ ಸಲ ಓದಿ ವುಝೂವಿನೊಂದಿಗೆ ಮಲಗಿದರೆ ಪ್ರವಾದಿ ( ﷺ) ರ ಕನಸು ಬೀಳುತ್ತದೆಯೆಂದು ಕೆಲ ಮಶಾಇಖ್ ಗಳು ಹೇಳಿದ್ದಾರೆ.
     
🔷ಇಮಾಂ ನಾಝಿಲೀ (رضي الله ﺗﻌﺎﻟﯽٰ عنه) ಹೇಳುತ್ತಾರೆ . ಶುಕ್ರವಾರ ರಾತ್ರಿ 6,000 ( ಆರು ಸಾವಿರ) ಸ್ವಲಾತ್ ಹೇಳಿದ ಬಳಿಕ ಸೂರತುಲ್ ಕೌಸರ್ ಸಾವಿರ ಬಾರಿ ಹೇಳಿ ಮಲಗಬೇಕು . ನಿರಂತರವಾಗಿ 3 ಶುಕ್ರವಾರ ಹೀಗೆ ಮಾಡಿದರೆ ಪ್ರವಾದಿ ( ﷺ) ರ ಕನಸು ಕಾಣುತ್ತದೆ.

ಸಂಗ್ರಹ :
ಆಧ್ಯಾತ್ಮಿಕ ಮೂಲಿಕೆಗಳು ಎಂಬಕೃತಿಯಯಿಂದ


✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H