ವಿಷಯ : ನಿತ್ಯ ಜೀವನದಲ್ಲಿ  ಭಕ್ಷ್ಯ ವಸ್ತುವಾಗಿದೆ ಉಪ್ಪು | ಇಸ್ಲಾಂನಲ್ಲಿ ಉಪ್ಪಿನ ಪ್ರಯೋಜನ |ಪ್ರವಾದಿ ﷺ ಔಷಧ


ಔಷಧ ಗುಣವಿರುವ ಉಪ್ಪು.ಉಪ್ಪಿನಿಂದ ಬಹಳಷ್ಟು ಅನಾರೋಗ್ಯವನ್ನು ದೂರಮಾಡಬಹುದು.

ನೆಬಿ ﷺರು ಹೇಳಿದರು ನಿಮ್ಮ ಪದಾರ್ಥಗಳ ನಾಯಕ ಉಪ್ಪು



ಇಬ್ನು ಉಮರ್(رضي الله عنه) ವರದಿ ಮಾಡಿದ ಹದೀಸ್ ನೆಬಿ ﷺ ಹೇಳಿದರು ಅಲ್ಲಾಹು ಆಗಾಶದಿಂದ 4 ಬರಕತ್ಗಳನ್ನು ಕೊಟ್ಟನು. ಕಬ್ಬಿಣ,ಬೆಂಕಿ,ನೀರು,ಉಪ್ಪುಈ 4 ವಸ್ತುಗಳು.

ಉಪ್ಪು ಅಲ್ಲಾಹು ಕೊಟ್ಟ ಬರಕತ್ ಇರುವ ಭಕ್ಷ್ಯ ವಸ್ತು ಆಗಿದೆ.ಆಗಂತ ಜಾಸ್ತಿ ಉಪ್ಪು ಬಳಸಬಾರದು ಉಪ್ಪು ಔಷಧವಾದರೂ ಅತಿಯಾದರೆ ಅಮೃತವೂ ವಿಷ ಉಪ್ಪು ಅತಿಯಾದರೆ ತುಂಬಾ ರೋಗಗಳು ಬರುವುದು. ಮಿತವಾಗಿ ಉಪಯೋಗಿಸಿದರೆ ದೇಹದ ಬಣ್ಣ ಉತ್ತಮವಾಗಿರುತ್ತದೆ. ಸ್ನಾಯುಗಳಿಗೆ ಸುರಕ್ಷಿದತ್ವ ನೀಡುತ್ತದೆ.

ಭಕ್ಷಣ ತಿನ್ನುವಾಗ ಉಪ್ಪುನಿಂದ ಆರಂಭಿಸುದು ಮತ್ತು ಕೊನೆಗೊಳಿಸುವುದು  ನೆಬಿ ﷺರ ಸುನ್ನತ್ ಆಗಿದೆ.

ಭಕ್ಷಣ ಆರಂಭಿಸುದು ಮತ್ತು ಕೊನೆಗೊಳಿಸುವುದು ಸ್ವಲ್ಪ ಉಪ್ಪುನಿಂದ ಆಗಲು ಭಕ್ಷಣದ ಪದ್ಧತಿಯಾಗಿದೆ.

ಆದ್ದರಿಂದ ನೀವು ಇಂದಿನಿಂದ ಆಹಾರ ತಿನ್ನುವ ಮೊದಲು ಮತ್ತು ನಂತರ ಉಪ್ಪುನಿಂದ ಆರಂಭಿಸಿ

ನೆಬಿ ﷺ ರು ಒಮ್ಮೆ ಅಲೀ رضي الله عنه ರವರಲ್ಲಿ ಹೇಳಿದರು. ಅಲೀಯೇ ತಾವು ಆಹಾರ ತಿನ್ನುವ ಮೊದಲು ಮತ್ತು ನಂತರ ಉಪ್ಪುನಿಂದಾಗಲಿ

ಮಾನಸಿಕ ರೋಗ,ಕುಷ್ಟ ರೋಗ,ಹೊಟ್ಟೆನೋವು,ಹಲ್ಲು ನೋವು ಇತ್ಯಾದಿ 70 ರೋಗಗಳಿಗೆ ಔಷಧಿಯಾಗಿದೆ ಉಪ್ಪು ಎಂದು ನೆಬಿ ﷺ ರು ಹೇಳಿದರು.

ಇಂತಹ ವಿಷಯಗಳು ನಮಗೆ ಜೀವನದಲ್ಲಿ ಅಳವಡಿಸಿಕೊಳ್ಳಲು ಅಲ್ಲಾಹು ತೌಫೀಕ್ ನೀಡಲೀ. ಅಲ್ಲಾಹು ನಮ್ಮರೋಗಗಳಿಗೆ ಶಿಫಾಹ್ ನೀಡಲು. ಆಮೀನ್


✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H