بسم الله الرحمن  الرحيم

ವಿಷಯ: ಮಹತ್ತರವಾದ ಬಿಸ್ಮಿಯ ಮಹತ್ವಗಳು 


👉ಕೇಳಿಸಿಕೊಂಡದೆಲ್ಲವೂ ಕಂಠಪಾಠವಾಗಲು

بسم الله الرحمن  الرحيم
ಎಂಬುವುದನ್ನು 786 ಸಲ ಹೇಳಿ ನೀರಿಗೆ ಊದಿ, ಆ ನೀರನ್ನು ಖಾಲಿ ಹೊಟ್ಟೆಗೆ ಸೂರ್ಯೋದಯಕ್ಕಿಂತ ಮುಂಚಿತವಾಗಿ ಕುಡಿಯಬೇಕು, ಹೀಗೆ ಮಾಡಿದರೆ ಬುದ್ಧಿಶಕ್ತಿ ಹೆಚ್ಚಾಗಿ ಕಂಠಪಾಠ ಸುಲಭವಾಗುತ್ತದೆಯೆಂದು “ದೈಲುತ್ತದ್ ಖಿರ” ಎಂಬ ಗ್ರಂಥದಲ್ಲಿದೆ.

👉ಸಿಹ್ರ್ ದೂರವಾಗಲು
بسم الله الرحمن  الرحيم
ಎಂಬುವುದನ್ನು ದಿನಂಪ್ರತಿ 100 ಸಲ ಹೇಳುವವನಿಗೆ ಮಾಟದ ತೊಂದರೆಯೇ ಉಂಟಾಗದು ಎಂದು ಇಮಾಂ ನಾಝಿಲೀ(رضي الله ﺗﻌﺎﻟﯽٰ عنه)ಹೇಳಿದ್ದಾರೆ.

ಕಠಿಣ ಮನಸ್ಕರಿಗೆ ಭೀತಿಯುಂಟಾಗಲು
بسم الله الرحمن  الرحيم
ಎಂಬುವುದನ್ನು ಪ್ರತೀದಿನ ಹೇಳುವವನನ್ನು ಕಾಣುವಾಗಲೇ ಕಠಿಣ ಮನಸ್ಕನಾದ ನ್ಯಾಯಾಧೀಶನಿಗೂ ಭೀತಿಯುಂಟಾಗುತ್ತದೆ ಎಂದು ಇಮಾಂ ಬೂನೀ, ತಿಲ್ ಮೀದುಲ್ ಅನ್ ತ್ವಾಖೀ, ದೈರಬೀ ಮುಂತಾದವರು ಹೇಳಿದ್ದಾರೆ.

👉ಗಾಂಭೀರ್ಯತೆ ಹೆಚ್ಚಾಗಲು
بسم الله الرحمن  الرحيم
ಎಂಬುವುದನ್ನು ಬಿಳಿಹಾಳೆಯಲ್ಲಿ 1000ಸಲ ಬರೆದು ಜತೆಗಿಟ್ಟರೆ ಶತ್ರುಗಳೆಡೆಯಲ್ಲಿ ಗಾಂಭೀರ್ಯತೆ ಹಾಗೂ ಸ್ನೇಹಿತರೆಡೆಯಲ್ಲಿ ಪ್ರೀತಿ ಹೆಚ್ಚಾಗುತ್ತದೆ.ಜನರೆಡೆಯಲ್ಲಿ ಗೌರವಿಸಲ್ಪಡುವನು.ಶಾಶ್ವತವಾಗಿ ಆರೋಗ್ಯ ಉಂಟಾಗುತ್ತದೆಯೆಂದು ಇಮಾಂ ನಾಝಿಲೀ (رضي الله ﺗﻌﺎﻟﯽٰ عنه).ಹೇಳಿದ್ದಾರೆ

👉ಒಳಿತು ಹತ್ತಿರವಾಗಲು
بسم الله الرحمن  الرحيم
ಎಂಬುವುದನ್ನು 786 ಸಲ 7 ದಿನ ನಿರಂತರವಾಗಿ ಹೇಳಿದರೆ ಒಳಿತು ಹತ್ತಿರವಾಗುತ್ತದೆ ಎಂದು ದಮೀರೀ ಮತ್ತು ತಿಲ್ ಮೀದ್ಸುಲ್ ಅನ್ ತ್ವಾಖೀ ಹೇಳಿದ್ದಾರೆ.

👉ವ್ಯಾಪಾರ ಸ್ಥಳದಲ್ಲಿ ಸಮೃದ್ಧಿಯುಂಟಾಗಲು
بسم الله الرحمن  الرحيم
ಎಂಬುವುದನ್ನು 35 ಸಲ ಬರೆದು ಅಂಗಡಿಯಲ್ಲಿ ತೂಗುಹಾಕಿದರೆ ವ್ಯಾಪಾರದಲ್ಲಿ ಲಾಭ ಹೆಚ್ಚಾಗುತ್ತದೆ.ಅಸೂಯೆಗಾರರು-ಅಕ್ರಮಿಗಳಿಂದ ರಕ್ಷೆ ಉಂಟಾಗುತ್ತದೆಯೆಂದು ಇಮಾಂ ನಾಝಿಲೀ,ತಿಲ್ ಮೀದ್ಸುಲ್ ಅನ್ ತ್ವಾಖೀ ಹೇಳಿದ್ದಾರೆ.

👉ನಿದ್ದೆಯಲ್ಲಿ ಪಿಶಾಚಿಯ ಉಪಟಳ ಉಂಟಾಗದಿರಲು
سم الله الرحمن  الرحيم
ಎಂಬುವುದನ್ನು 21 ಸಲ ಓದಿದರೆ ಶೈತಾನ್,ಜಿನ್ನ್,ಮನುಷ್ಯ,ಕಳ್ಳ,ಬೆಂಕಿ ಮುಂತಾದವುಗಳ ಉಪಟಳ ಉಂಟಾಗುದಿಲ್ಲವೆಂದೂ, ಆ ನಿದ್ದೆಯಲ್ಲಿ ಮರಣ ಸಂಭವಿಸದೂ ಎಂದು ನಾಝಿಲೀ,ದೈರಬೀ,ತಿಲ್ ಮೀದ್ಸುಲ್ ಅನ್ ತ್ವಾಖೀ ಮುಂತಾದವರು ವಿವರಿಸಿದ್ದಾರೆ.

👉ಜೈಲಿಗೆ ಹಾಕಲ್ಪಟ್ಟರೆ
سم الله الرحمن  الرحيم
ಎಂಬುವುದನ್ನು ಪ್ರತಿದಿನ ರಾತ್ರಿಯಲ್ಲೂ -ಹಗಲಿನಲ್ಲೂ 1000 ಸಲ ಹೇಳಿದರೆ ಮರಣ ದಂಡಣೆ ವಿಧಿಸಲ್ಲಟ್ಟಿದ್ದರೂ ಮೋಕ್ಷ ಲಭಿಸುತ್ತದೆಯೆಂದು ನಾಝಿಲೀ(رضي الله ﺗﻌﺎﻟﯽٰ عنه)ಹೇಳಿದ್ದಾರೆ


ಸಂಗ್ರಹ : ಆಧ್ಯಾತ್ಮಿಕ ಮೂಲಿಕೆಗಳು ಎಂಬಕೃತಿಯಯಿಂದ

✍️ ಮೊಹಮ್ಮದ್ ಶಾಕಿರ್  ರಂತಡ್ಕ ಬೋಲಿಯರ್

Follow this link to join my WhatsApp group: https://chat.whatsapp.com/HiCYOdVoO6dCK84J7wkH7H